Wednesday, September 16, 2015

ಗುಬ್ಬಿ ಮರಿ
ತೊಟ್ಟಿಲ ತೊರೆದೆ ನಾನು
ರೆಕ್ಕೆಯ ಕಟ್ಟಿದೆ ನೀನು

ಜೊಗುಳವ ನೀ ಹಾಡಿದೆ
ಅಂಗಳದಿ ಆಡಿ ನಾ ಬೆಳೆದೆ

ಗುಬ್ಬಿ ಮರಿ ನಿನಗೆ ನಾನೆಂದೆಂದೂ
ನಿನ್ನ ಪರಿ ಪ್ರೀತಿಸಲು ಇರಲಾರರೆಂದೂ

ಕಾಡಲು ಸಾಧ್ಯವೇ ಜಗದೊಳಾವಾ ಗುಮ್ಮ?
ಇರಲು ಆಶ್ರಯದಾತೆ, ಕಾಯುವ ನನ್ನ ಅಮ್ಮಾ

1 comment:

Navoo said...

Nice !! Last two lines is good but don't know how you are trying to relate to it !!