ಅವಳಿಡುವಾ ಹೆಜ್ಜೆ..

ಫಸೆಬುಕ್‌ನಲ್ಲಿ ಒಂದು ಚಂದದ ಛಾಯಾಚಿತ್ರ ನೋಡಿ ಸ್ಪೂರ್ತಿಗೊಂಡು ಬರೆದ ಪದ್ಯವಿದು.
ಎಲ್ಲರಿಗೂ ಹಿಡಿಸುತ್ತೆ ಎಂದು ಭಾವಿಸಿರುವೆ.... ದಯವಿಟ್ಟು ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ :) 
ಅವಳಿಡುವಾ ಪ್ರತಿ ಹೆಜ್ಜೆ...
ನನ್ನೆದೆಯ ಏರಿಳಿತ, ಆ ಗೆಜ್ಜೆ....

ನಡೆದಾಡುವಳು ಇಡುತಾ
ಎದೆಯಲಿ ಗುರುತು...
ನರ್ತಿಸು ನಿಂತು ನಗುತಾ
ಗುಡಿಸಲಿದು ನಿನ್ನ ಹೊರತು...

ಗುಬ್ಬಿಮರಿ, ನಿನ್ನ ನೋಡುತಾ,
ಮರೆವೇ ಎಲ್ಲ ರಂಪ ರಗಳೆ....
ಕಣ್ಣಲಿ ಹೊಳಪು, ಜೀವಕೆ ಬೆಳಕು,
'ತಂದೆ' ಜನುಮಕೆ, ನೀ 'ಮಗಳೆ'!!!

Comments

Popular posts from this blog

Exotic Ghatikallu Trip

ನಾ ಜಾರುತಿಹೆ