Total Pageviews

Tuesday, March 6, 2012

ಬೇಸರವಿಲ್ಲದ ಬೇಸಿಗೆ....


ಬೇಸಿಗೆ ಬಂತು ಅಂದ್ರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಆದರೆ ಇದೆಯ ಖುಷಿ ಎಲ್ರಿಗೂ ಇದೆಯಾ ಅಂತ ನಂಗೆ ಕರೆಂಟ್ ಹೋದಾಗ ಒಂದು ಸಣ್ಣ ತುರಿಕೆ ಶುರು ಆಗಿ ಈ ತರಹ ಒಂದು ಲೇಖನ ಬರೆಯೋ ಹಾಗಾಯ್ತು.
ಚಿಕ್ಕವರಿದ್ದಾಗ , ನಾನೇ ಹೇಳಿದ ಹಾಗೆ ಬೇಸಿಗೆ ರಜೆಯನ್ನ ಇಡೀ ವರ್ಷ ಎದುರು ನೋಡ್ತಾ ಇದ್ವಿ.ಅದು ಬರಿ ರಜ ಸಿಗುತ್ತೆ ಅನ್ನೋ ಖುಷಿ ಅಲ್ಲ.... ರಜೆಯೊಂದಿಗೆ ಎಷ್ಟು ಪರ್ಕ್ಸ್ ಕೂಡ ಒಟ್ಟಿಗೆ ಬರ್ತಿತ್ತು ಅಂತೀರಾ? ರಜ ಶುರು ಆಗೋ ಕೆಲವೇ ದಿನಕ್ಕೆ ಉಗಾದಿ ಬರೋದು ಅದರೊಟ್ಟಿಗೆ ಮಾವಿನ ಚಿತ್ರಾನ್ನ ದಿಂದ ಶುರುವಾಗಿ, ಉಣಿಸೇ ಹಣ್ಣು ಜಜ್ಜಿ ಬೆಲ್ಲ ಹಾಕಿ ತಿನ್ನೋದೆನು, ಮಾವಿನ ಕಾಯಿ ಎಲ್ಲಿಂದಾದರೂ ಕದ್ದು ತಂದು ಕಳ್ಳಲ್ಲಿ ಚಚ್ಚಿ ಉಪ್ಪು ಕಾರ ಹಾಕಿ ಕಣ್ಣು ಹೊಡಿತ ಗೆಳೆಯರೊಂದಿಗೆ ಚಪ್ಪರಿಸೋಡಿದ್ಯಲ್ಲ... ಅದ್ರ ಮಜಾನೇ ಬೇರೆ.ಅಷ್ಟೇ ಅಲ್ಲ ಕಂಡ ಕಂಡ ಕಡೇಯ ಸೀಬೆ ಹಣ್ಣಿನ ಮರಕ್ಕೆ ಹಾರೋದಕ್ಕೂ ಏನು ಮಿತಿ ಇರುತ್ತಿರಲಿಲ್ಲ.ಇನ್ನೂ ಅಮ್ಮಂದಿರಿಗೆ ಮಕ್ಕಳು ಮನೇಲಿ ಯಾಕಿದಾವೋ ಅನ್ಸೋ ಅಷ್ಟು ಗೋಳ್ ಹೊಯ್ಕೊಂಡು "ಅಮ್ಮ ಅದು ಕೊಡು, ಇದು ಕೊಡು" ಅಂತ ತಲೆ ತಿನ್ನೋದಕ್ಕೂ ಅಮ್ಮ ಎಲ್ಲ ಮಾಡಿಕೊಟ್ಟು ಮಧ್ಯಾನ ಬೈದೊ ಹೊಡೆದೋ ಗದರಿಸಿ ಸ್ವಲ್ಪ ಹೊತ್ತು ಮಲಗಿಸುತ್ತಿದ್ದಳು.ಮತ್ತೆ ಸಂಜೆ ಆಟಕ್ಕೆ ಹೋಗೋದಕ್ಕೆ ಮತ್ತೆಲ್ಲಿ ಬೈತಾಳೊ ಅನ್ನೋ ಭಯದಲ್ಲೇ ಪೀಟಿಕೆ ಹಾಕಿಯೋ ಅತ್ವ ಹೊರಗೆ ಕಾಣೊ ಗೆಳಾಯ್‌ನನ್ಣ ಸನ್ನೆ ಮಾಡಿ ಮನೆಗೆ ಬಂದು ಅಮ್ಮನ ಪೂಸಿ ಹೊಡೆಯೋಕೆ ಕೇಳುತ್ತಿದ್ದ ನೆನಪು ಈಗಲೂ ಬಂದು ಒಂದು ನಗೆ ಹಾಗೆ ಮಿಂಚಿ ಹೋಗತ್ತೆ.
ಇನ್ನೂ ಹಳೆಯ ವರ್ಷದ ಹಳೆಯ್ ಪುಸ್ತಕಗಳಲ್ಲಿ ಬೇಕಾದದ್ದನ್ನು ಇಟ್ಟುಕೊಂಡು ಕೆಲಸಕ್ಕೆ ಬಾರದ ಪುಸ್ತಕ ಅತ್ವ ಇಷ್ಟ ಆಗದ ಮಿಸ್ ಕೊಡುತಿದ್ದ ಹೋಮ್‌ವರ್ಕ್ ಪುಸ್ತಕಗಳನ್ನ ಹರಿಯುವಾಗ ಆ ಮಿಸ್ಸನ್ನೆ  ಹರಿದಂತ ರಾಕೆಟ್ ಮಾಡಿ ದೂರಕ್ಕೆ ಬಿಟ್ಟ ಖುಷಿ ಪಡುತಿದ್ದ ಪರಿಯನ್ನ ಕಂಡರೆ ಭಾರತ ಪಾಕಿಸ್ತಾನದ ಮೇಲೆ  ಗೆದ್ದ ಸಂಭ್ರಮವೂ ಇದಕ್ಕೆ ಸಾಟಿ ಇರಲ್ವೇನೋ!
ಹಾಗಂತ ಏನು ತರಲೆ ಮಾಡೋದೇ ಕೆಲಸ ಅಲ್ಲ... ಬೆಳಗ್ಗೆಯೇ ಎದ್ದು ಜಾಗಿಂಗ್ ಅಂತ ಗುಂಪು ಕಟ್ಟಿಕೊಂಡು ಹೊರಗೆ ಹೋಗಿ ಆಟ ಆಡಿ , ಅಲ್ಲಿ ಇಲ್ಲಿ ಸಿಗೋ ಹೂವುಗಳನ್ನ ಹೆಕ್ಕಿ ತಂದು, ಅಮ್ಮನ ಮನ ಗೆಲ್ಲೋ ಅವಕಾಶವೂ ಇರುತಿತ್ಟು. ಅಷ್ಟು ಸಾಲದೆಂಬಂತೆ ಪರಸ್ಪರ ಉಪಯೋಗ ಆಗೋ ಅಂತ ಒಂದು ಕಾರ್ಯ ಇತ್ತು ನೋಡಿ - ಹಪ್ಪಳ ಸಂಡಿಗೆ ಹಾಕೋದು. ಅಮ್ಮ ಹಿಟ್ಟು ಮಾಡಿ ಒಂದು ಚಮಚೆ ಕೊಟ್ಟು ತೆಳುವಾಗಿ ಹಾಕು ಮಗಳೆಅಂತ ಹೇಳಿ ಒಂದು ಪಂಚೆ ಮುಂದಿಟ್ಟು ಹೋದರೆ, ಅದನ್ನು ಪೂರ್ತಿ ರಂಗೋಲಿ ಬಿಡಿಸೋ ಜವಾಬ್ದಾರಿ ನನ್ನದು.ಕಾಗೆ ಬರದಂತೆ ನೋಡಿಕೊ ಅಂತ ಹೇಳಿ ಹೋದರೆ ಅರ್ಧ ಒಣಗಿದ ಆ ಸಂಡಿಗೇನ ಕಾಗೆ ಬರದಂತೆ ತಡೆದು, ನಾನೇ ದೊಡ್ಡ ಕಾಗೆಯ ಹಾಗೆ ಅರ್ಧ ಮುಗಿಸುತ್ತಿದ್ದೆ!
ಸಂಜೆ ಹೊತ್ತಿಗೆ ಅಮ್ಮ ಮಾಡಿದ ಸಂಡಿಗೆಯೋ , ಕಡಲೆ ಪುರಿ ಒಗ್ಗರಣೆಯೋ ಅತ್ವ ಅವಲ್ಲಕ್ಕಿಯನ್ನು ಚೆನ್ನಾಗಿ ತಿಂದು ಕಣ್ಣ ಮುಚ್ಚಾಲೆ, ಐಸ್ ಪೈಸ್, ಲಗೋರಿ, ಕಲ್ಲು ಮಣ್ಣು ಅಂತ ಅಡಕ್ಕೆ ಹೋದರೆ ಮನೆಗೆ ಇನ್ನೂ ತಲುಪೋದು ಏನಾದ್ರೂ ಒಂದು ಎಡವಟ್ಟು ಮಾಡಿಕೊಂಡೆ. ಗಾಯ ಆದ ಭಯಕ್ಕಿಂತ ಅಮ್ಮನ ಬಾಯಿಂದ ಬರುವ ಬೈಗುಳವೆ ತುಂಬಾ ನೋವುಟುಂಬುವಂತೆ ಭಾಸವಾಗಿ ಎಷ್ಟು ಗಾಯಗಳನ್ನ ತೋರಿಸದೇ ಇರಲು ಹಾರ ಸಾಹಸ ಪಡುತ್ತಿದ್ದ ಪರಿಯನ್ನು ಈಗಲೂ ಉಳಿದಿರುವ ಕೆಲವು ಗಾಯದ ಗುರುತು ನೆನಪಿಸುತ್ತದೆ.
ಇಷ್ಟೆಲ್ಲಾ ಮನೆಯಲ್ಲಾದರೆ ಇನ್ನೂ ಊರಿಗೆ ಹೋಗುವ ಖುಷಿಯನ್ನoತೂ ಹೇಳತೀರದು.ವರ್ಷಕ್ಕೆ ಒಮ್ಮೆಯೋ ಅತ್ವ ಎರಡು ಬಾರಿ ಮಾತ್ರ ಸಿಗುವ ಸ್ನೇಹಿತರನ್ನ ಹೋಗಿ ನೋಡೋಕೆ ಏನೋ ಒಂದು ರೀತಿಯ ಖುಷಿ.
ಅಲ್ಲಿ ಬುಸ್ ಇಳಿಯುತ್ತಿದ್ದಂತೆ ಯಾವುದಾದರೂ ಪರಿಚಿತ ಮುಖದ ದರ್ಶನವಾಗುತ್ತಾ ಅಂತ ಓಡಿ ಹೋಗುವ ತವಕ ಬಸ್ ಸ್ಸ್ಟಾಂಡ್ ತಲುಪುವ ಮುನ್ನವೇ ಶುರು ಆಗ್ತಾ ಇತ್ತು.ಊರಿನಲ್ಲಿ ಅಜ್ಜಿ ಸುಟ್ಟಿಕೊಡುವ ರಾಗಿ ರೊಟ್ಟಿಗೆ ಮನೆಯಲ್ಲೇ ಮಾಡಿದ ತುಪ್ಪ ಬೆಣ್ಣೆ ಹಾಕಿ ನೆಕ್ಕಿ ನೆಕ್ಕಿ ತಿಂದು, ಕಡೆದು  ಮಾಡಿದ ಮಜ್ಜಿಗೆಯನ್ನ ಗಟಗಟ ಅಂತ ಕುಡಿಯೊ ಸವಿಗೆ, ತಂಪಾದ ತೋಟ ಮರದ ಕೆಳಗೆ ತಂಪಾಗಿ ಒರಗಿ ಮಲಗಿದಾಗ ಬೇಸಿಗೆಯ ಬಿಸಿ ಎಲ್ಲಿ ಮಾಯವೋ!
ಈಗ ಏನಿದೆ? ನಾನು ನೋಡೋ ಈಗಿನ ಮಕ್ಕಳು ಬಾಯೀ ತೆಗೆದ್ರೆ ಮಾರಿಟಿಯಸ್ , ಸಿಂಗಪುರ್ ಅಂತಾವೆ ಆದ್ರೆ ಅಜ್ಜ ಅಜ್ಜಿ ಮನೆಯ್ ಇರಲ್ಲ... ರಜಾದಲ್ಲಿ ಮಜ್ಜಿಗೆ ಬಿಡಿ ಬರಿ ಮಿಲ್ಕ್‌ಶೇಕ್ , ಪಿಜ಼್ಜ಼ ಬರ್ಗರ್ ತಿಂಡ್‌ಕೊಂಡು, ಮನೇಲೆ ಕೂತು ಕಂಪ್ಯೂಟರ್ ಗೇಮ್ಸ್ ಆಡ್ತಾರೆ. ಕರೆಂಟ್ ಹೋದ್ರೆ ಜೀವನನೆ ಇಲ್ಲ ಅನ್ನೋ ರೀತಿ ಹಿಂಸೆ ಪಡ್ತಾರೆ. ಆಗ ನಂಗೆ ಕರೆಂಟ್ ಇದ್ರು ಒಂದೇ ಇಲ್ದೇ ಇದ್ರು ಒಂದೇ , ಯಾಕಂದ್ರೆ ನಂಗೆ ನಿಜ ಜಗತ್ತಿನ ಗೆಳೆಯರು ಎದುರಿಗೆ ಸಿಕ್ಕಿ ಆಟ ಆಡ್ತೀದ್ವಿ. ಈಗ ಏನಿದ್ದರೂ ಫೇಸ್ ಬುಕ್ಫ  ಪೋಕ್ ಮಾಡಕ್ಕೆ ಸಿಗ್ತಾರೆ :)
ಇಲ್ಲಿ ಇದನ್ನ ಕಂಪ್ಲೇಂಟ್ ಅಂದ್ಕೊಳ್ಳಬೇಡಿ. ಪರಿವರ್ತನೆ ಜಗದ ನಿಯಮ ಅಂತೆ. ಅದನ್ನ ಯಾರು ತಾನೇ ತಡೆಯೋಕೆ ಆಗತ್ತೆ.ನಂಗೆ ಅದ್ರಲ್ಲಿ ಖುಷಿ ಇದ್ದಿರಬಹುದು ಆದರೆ ಈಗಿನ ಮಕ್ಕಳಿಗೆ ಟೆಕ್ನಾಲಜೀ ಎ ತಂದೆ ತಾಯಿ ಬಂಧು ಬಳಗ ಎಲ್ಲ. ಒಂದು ರೀತಿಯಲ್ಲಿ ಒಳ್ಳೆಯದೇ ಆದರೂನೂ, ಮನುಷ್ಯ ಸಂಘ ಜೀವಿ ಅನ್ನೋದನ್ನ ದೂರ ಮಾಡುವಂತ ಜೀವನ ಶೈಲಿಗೆ ನಿಧಾನವಾಗಿ ಜಾರುತಿದ್ದ ಹಾಗೆ ಅನಿಸುತ್ತೆ.
ಕರೆಂಟ್ ನ ಆ ಪರಿ ಬೈಕೊಳೋಕೆ ಹೋರಟ ನಂಗೆ ಕರೆಂಟ್ ಒಂದು ಹೋಗಿದ್ದು ಈಗ ವಾರವಾಯ್ತು ನೋಡಿ. ಕರೆಂಟ್ ಹೋಗಿಲ್ಲ ಅಂದಿದ್ರೆ ಮನೇಲಿ ಕೂತು ಕೆಲ್ಸಾ ಮಾಡ್ತಿದ್ದ ನಂಗೆ ಬೆವರೋ ಅನುಭವ ಆಗ್ತಾ ಇರ್ಲಿಲ್ಲ, ನೆನಪುಗಳನ್ನ ಮೆಲುಕು ಹಾಕೋದಕ್ಕೂ ಆಗ್ತಿರಲಿಲ್ಲ....
ಇನ್ನೂ ಏನೇನೋ ನೆನಪು ಎಳೆ ಎಳೆಯಾಗಿ ಬರುತ್ತ ಇತ್ತು. ಅದಾರೆ ಕರೆಂಟ್ ಒಂದು ವಾಪಸ್ ಬಂತು ನೋಡ್ರೀ, ನಿಜ ಜೀವನಕ್ಕೆ ಮರಳಿ ನನ್ನ ಕೆಲಸ ಕಾರ್ಯಗಳನ್ನ ಮೂಗಿದ್ಸೋದಕ್ಕೆ ಹೊರಡಬೇಕು.
ಈ ಬೇಸಿಗೆಯನ್ನು ನಿಮ್ಮ ಸ್ನೇಹಿತರೊಂದಿಗೆ ಹೋಳಿ ಆಡಿ ಶುರು ಮಾಡಿ, ನಿಮ್ಮ ಬಾಲ್ಯದ ಅನುಭವಗಳನ್ನು ಇಲ್ಲಿ ಹಂಚಿಕೊಳ್ಳಿ  :)


Voices in my head

I am never alone Those days have gone long There are voices, there are voices… There are voicessssss up - when I close my eyes ...