ಹುಸಿ ಮುನಿಸೆ,ನಿಜ ಮುನಿಸೆ?

ಕೋಪಿಸಿಕೊಂಡ ಹೆಂಡತಿಯನ್ನು ರಮಿಸುವ ಪತಿಯ ಮಾತುಗಳಿವು.... :)


ಹುಸಿ ಮುನಿಸೆ,ನಿಜ ಮುನಿಸೆ?
ತರವಲ್ಲ ಬಿಡು ಗೆಳತಿ...
ನನ್ನ ದೂರ ತಳ್ಳೋ ಮನಸೇ?
ನಗೆ ತೊರೆದ ನಿನ್ನ ಮೊಗದಿ ....

ಚಂದಿರ ಬಂದಾಯ್ತು,ತೆಂಗಿನ ಮೇಲೆ
ಸರಸರನೆ ತೊಡಿಸೆ ತೋಳಿನ ಮಾಲೆ...
ಎದೆ ಬಡಿತ ಮೇಲೇರಿ,ಸೊಕಲು ನಿನ್ನ ಜುಮುಕಿ,
ಎಳೆಎಳೆಯಾಯ್ತು ಮನಸಿನಾ ಗಮಕಿ....

ಈ ಮೌನವ ಇನ್ದಿಲ್ಲೆ ಮುಗಿಸೇ,
ಹಾಡೊಂದು ಮೊಳಗಿದೆ ಈ ಮನದಿ


ಕೆಂಪಾದ ತುಟಿಯಲ್ಲಿ,ವೀಳ್ಯ ಕೆಂಪು
ದುರ್ಗಿಯ ಕ್ಷಣ ಮರೆತು, ತಾರೆಯ ತಂಪು
ಹೊದಿಸಲೆ ನಿಂಗೆ ಪ್ರೀತಿಯ ಚಾದರ
ಎಣಿಸಿ ಪೋಣಿಸಲೇ ಮುತ್ತು ಸಾವಿರ

ಹುಸಿ ಮುನಿಸೆ,ನಿಜ ಮುನಿಸೆ?
ತರವಲ್ಲ ಬಿಡು ಗೆಳತಿ...

Comments

ಅಬ್ಬಬ್ಬಾ !! ಬೇಡ ರೀ ನಮ್ ಪಾಡು ..ತುಂಬಾ ಕಷ್ಟ ರೀ ,ಇಷ್ಟೆಲ್ಲಾ ಮಾಡಿದ್ರು ... ಕೋಪ ತಣ್ಣಗಾಯಿತೂ ಇಲ್ವೋ

Popular posts from this blog

Exotic Ghatikallu Trip

ನಾ ಜಾರುತಿಹೆ