ಜೀವನ(ದಿ)

ಒಂದು ಹೆಣ್ಣನ್ನು ಜೀವನದಿಗೆ ಹೋಲಿಸಿ, ಅವಳಿಗಾಗಿ ಹೊಡೆದಾಡುವ ಎರಡು ಪ್ರದೇಶಗಳನ್ನು ತವರು ಮತ್ತು ಗಂಡನ ಮನೆಗೆ ಹೋಲಿಸಿ ಬರೆದಿರುವ ಪದ್ಯವಿದು.
ಹೆಣ್ಣಿನ ಜನ್ಮ ನದಿಯಂತೆ,ಹುಟ್ಟುವುದೆಲ್ಲೋ ಸೇರುವುದಿನ್ನೆಲ್ಲೋ....
ಎಲ್ಲರನ್ನೂ ಸಂತೋಷ ಪಡಿಸಬೇಕು ಅವಳು....
ತನ್ನ ನೋವನ್ನು ಅವಳು ಜನ್ಮ ಕೊಟ್ಟ ತಾಯಿ ಹಾಗೂ ಗಂಡನ ಮುಂದೆ ನಿವೆದಿಸುತ್ತಾ ಇಬ್ಬರಿಗೂ ಅವಳ ಭಾವನೆಯನ್ನು ತಿಳಿಸಲು ಪ್ರಯತ್ನ ಪಡುವುದನ್ನ ಕೊನೆಯ ಎರಡು ಪದ್ಯ ಭಾಗದಲ್ಲ್ಲಿ ಕಾಣಬಹುದು.
ಒಮ್ಮೆ ಅಮ್ಮನನ್ನು ಕುರಿತು, ಮತ್ತೊಮ್ಮೆ ಗಂಡನನ್ನು ಕುರಿತು ತನಗಿರುವ ಪ್ರೀತಿಯನ್ನು ಹೇಳುತ್ತಾ ಕತ್ತರಿಯಲ್ಲಿ ಸಿಕ್ಕಿರುವ ಅಡಕೆಯಂತೆ ತನ್ನ ಬಾಳು ಎನ್ನುವುದನ್ನು ಮನವರಿಕೆ ಮಾಡಲು ಪ್ರಯತ್ನಿಸುತ್ತಾಳೆ....
ಮುಂದಕ್ಕೆ ಓದಿ ತಿಳಿದುಕೊಳ್ಳಿ….*************************************************
ಅಮ್ಮ ನಿನ್ನ ಮರೆಯಲಿ ಹ್ಯಾಂಗಾ?
ಸಂಗಾತಿಯ ನಾ ತೊರೆಯಲಿ ಹ್ಯಾಂಗಾ?

ನಿನ್ನ ಅಂಗಳದಿ ಚಿಲುಮೆಯಾಗಿ ನಲಿದೆ,
ನನ್ನ ಬಳುಕು ಬಿನ್ನಾಣ ನಿನ್ನೆದೆಯ ಹಸೀರಾಯಿತು, ಬಾಳ ಬಸಿರಾಯಿತು..
ಮೈನೇರೆದ ನಾ, ನೆರೆಯಾತನಿಗೆ ಒಲಿದೆ,
ನಾನಲ್ಲಿ ನಡೆದಾಗ ಅವನಲ್ಲೂ ಮಿಂಚಿನ ಸಂಚಾರವಾಯಿತು, ಬಾಳು ಬಂಗಾರವಾಯಿತು.

ನಿನ್ನೆದೆಯ ನೋವಿಗೆ, ಉಸಿರೇ ನಾನಮ್ಮ,
ಜೀವಧಾರೆ ನಿನಗೆ ಜೀವವಿದು ಮುದಿಪಿಟ್ಟೆ.
ನಾ ಬರುವೆನೆಂದು ಕಾಯುವನು ಅವನಮ್ಮ,
ಅವನ ಪ್ರೀತಿಯ ಸೆಳೆತಕ್ಕೆ ಮನಸ ನಾ ಕೊಟ್ಟೆ.

ಹೋಗಿ ಬರುವೆ ತಾಯೇ, ಹರಸಿ ನೀ ಕಳಿಸು,
ನನ್ನಾತ ಆತನನ್ನು ಎಂದೂ ನೀ ಹಳಿಯಬೇಡ.
ಆವ್ವನಾ ತೊರೆವ ಭಾರ ಗೆಳೆಯ ನೀ ಇಳಿಸು,
ಅವಳ ಬಳಿಗೆ ಹೋಗುವಾಗ ಇನಿಯಾ ನೀ ತಡೆಯಬೇಡ.

ಅಮ್ಮ ನಿನ್ನ ಮರೆಯಲಿ ಹ್ಯಾಂಗಾ?
ಸಂಗಾತಿಯ ನಾ ತೊರೆಯಲಿ ಹ್ಯಾಂಗಾ?

Comments

Dr.Adi said…
ಕನ್ನಡ ದಲ್ಲಿ ಬರಿಯೋಕೆ ಒಂದು ಗ್ರೂಪ್ ಬ್ಲಾಗ್ ಮಾಡ್ತಿದೀನಿ ನಿಮ್ಮನ್ನು ಅದರಲ್ಲಿ ಸೇರಿಸಿಕೊಳ್ಳುತ್ತಿದ್ದೇನೆ.
ಇಷ್ಟ ಇಲ್ಲ ಅಂದ್ರೆ ಮೈಲ್ ಮಾಡಿ

Popular posts from this blog

Exotic Ghatikallu Trip

ನಾ ಜಾರುತಿಹೆ