ಹೇಳದೆ ಮನೆಯಿಂದ ಯಾರಾದರೂ ಹೊರಟೆರೆಂದರೆ ಮನದಲ್ಲಿ ಬೇಕಾದಷ್ಟು ಕಸಿವಿಸಿ, ಪ್ರಶ್ನೆಗಳು ಬಂದರೂ ಮುಂದೊಂದು ದಿನ ಸಿಕ್ಕಿದಾಗ ಕೇಳಬಹುದು, ಅಥವಾ ಫೋನ್ ಮಾಡಬಹುದು.... ಸ್ವಲ್ಪ ನೋಟ್ ರೀಚಬಲ್ ಆದ್ರೇನೇ ನಮಗೆ ಸಹಿಸಲಾಗದು. ಹಾಗಿದ್ದಾಗ, ಪ್ರೀತಿಪಾತ್ರರು ಯಾವಾಗಲೂ ನಮ್ಮೊಟ್ಟಿಗೆ ಇರುತಾರೆಂದು ತಿಳಿದಿರುವ ಮನಕ್ಕೆ ಆಘಾತ ಆಗೋದು, ಹೇಳದೆ ಕೇಳದೆ ಹೊರಟಾಗ - ಮತ್ತೊಂದು ಜಗಕ್ಕೆ .... ಆ ನೋವು ಸ್ವಂತದ್ದೇ ಆದರೂ, ಭವನಗಳ ಸಂಬಂಧಗಳು ಒಂದೇ ತರ್ನಾದ್ದು ..... ಇತ್ತೀಚಿಗೆ ಅಗಲಿದ ನನ್ನ ಗೆಳೆಯರ ಪ್ರೀತಿಪಾತ್ರರಿಗೆ ಅರ್ಪಣೆ..... "ಪಯಣ"
ಕಣ್ಣಿನಾ ಕಡಲಿಂದ
ಜಾರಿತೊಂದು ಹನಿಯು
ಮನದ ಮೂಲೆಯಿಂದ
ಕಾಣೆಯಾಯ್ತು ದನಿಯು....
ಹೆಗಲನೇರಿ ಭಾರ,
ದೂರವಾಯ್ತು ತೀರಾ.....
ನೆರಳಿನಂತೆ ಜೊತೆಯಲಿದ್ದು, ಕಡಲ ಸೇರಿ ನೇಸರಾ........
ಗೆಳೆಯನಾಯ್ತು ಬೇಸರ
ಗಾಳಿ ಹಿಂದೆ ಮುಂದೆ ಸೋಕಿ,
ನಿನ್ನ ನೆನಪೇ ಭಾಸವಾಗಿ
ಕೊನೆಯ ಮಾತು ಹೇಳದೆಯೇ, ಹೊರಟೆ ಎಲ್ಲಿ ಎತ್ತರಾ.....
ನೀಡದಂತೆ ಉತ್ತರ...
ಕೊಡಲಿ ಏನು ಅವನಿಗೆ
ನೋಡಲೊಮ್ಮೆ ನಿನ್ನನು?
ಒಮ್ಮೆ ಬಾ ಅರೆ ಘ್ಹಳಿಗೆ,
ಬೇರೆ ಏನು ಬೇಡೆನು
No comments:
Post a Comment