ಹೀಗೊಂದು ದಿನ ಒಂದು ಕನ್ನಡ ಚಿತ್ರದ ವಿಮರ್ಶೇನ ನಾನು ಬರೀತೀನಿ ಅಂತ ಅಂದುಕೊಂಡಿರಲಿಲ್ಲ. ಆದರೆ ಇವತ್ತ್ತು ಬರೆಯೋ ಮನಸಾಯಿತು - ಒಂದು ಮೊಟ್ಟೆಯ ಕಥೆ ಅಂಥಾದ್ದು!
ವಿದೇಶಕ್ಕೆ ಹಾರಿ ಮೂರು ವರ್ಷಗಳಾಗಿದ್ದರೂ, ಬೆರಳೆಣಿಕೆಯ ಕನ್ನಡ ಚಿತ್ರಗಳು ಥಿಯೇಟರ್ ತಲುಪಿದವು, ಅದರಲ್ಲಿ ಕೆಲವು ಮಾತ್ರ ನನ್ನನ್ನು. ಒಂದು ಮೊಟ್ಟೆಯ ಕಥೆ ತಂಡ ಚಿತ್ರದ ಪ್ರಿಮಿಯರ್ ಅನ್ನು ಡ್ಯಾಲಸ್ ಅಲ್ಲಿ ಮಾಡುತಿದ್ದಾರೆ ಅಂತ ನಿರ್ಮಾಪಕರಾದ ಪವನ್ ಕುಮಾರ್ ಅವರು ತುಂಬಾನೇ ಪ್ರಚಾರ ಮಾಡಿದ್ದರ ಫಲ, ಇಲ್ಲಿನ ಜನರು ಅದನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿ ಹೌಸ್ ಫುಲ್ ಕೊಟ್ಟು ಸ್ಪಂದಿಸಿದರು. ಚಿತ್ರಮಂದಿರಕ್ಕೆ ಅಪರೂಪಕ್ಕೆ ಕಾಲಿಡುವ ಕನ್ನಡಿಗರ ಬಳಿ ಒಂದು ಪ್ರಯೋಗಾತ್ಮಕ ಚಿತ್ರಾನ ತಂದು ಯಶಸ್ವಿ ಆಗೋಕೆ ತುಂಬಾನೇ ಆತ್ಮವಿಶ್ವಾಸ ಬೇಕು - ಜೊತೆಗೆ ಅಂತಹ ಕಥೆಯೂ ಬೇಕು. ಒಂದು ಮೊಟ್ಟೆಯ ಕಥೆ ಅದಕ್ಕೊಂದು ಒಳ್ಳೆ ಉದಾಹರಣೆ.
ಬಿರಿಯಾನಿ ತಿನ್ನೋವಾಗ ಬಾಯಿಗೆ ಏಲಕ್ಕಿ ಸಿಗಬಾರ್ದು ಅಂತ ಬೇಡಿಕೊಂಡು ತಿನ್ನುವ ಹಾಗೆ ಚಿತ್ರ ನೋಡುತ್ತಾ, ನಾನು ಸಹ "ಪ್ಲೀಸ್, ನೆಕ್ಸ್ಟ್ ಸೀನ್ ಹಾಗಿರದಿರಲಿ, ಹೀಗಿರದಿರಲಿ" ಅಂತ ಬೇಡಿಕೊಳ್ಳುತ ಇದ್ದೆ(ತುಂಬಾ ಜನರಿಗೆ ಚಿತ್ರಕ್ಕೆ ಬನ್ನಿ ಅಂತ ಒತ್ತಾಯ ಮಾಡಿ ಕರೆಸಿದ್ದೆ, ಅದರ ಭಯ ಬೇರೆ!!) ಸಿನಿಮಾ ಶುರು ಆದಗಿಂದ ಕೊನೆಯ ವರೆಗೂ ಎಲ್ಲೂ ಇಂತ ಒಂದು ಸೀನ್ ಬೇಕಿರಲಿಲ್ಲವೇನೋ ಅನಿಸದಷ್ಟು ಚೊಕ್ಕಟವಾದ ಎಡಿಟಿಂಗ್, ಎಲ್ಲಿ ಎಷ್ಟು ಬೇಕೋ ಅಷ್ಟೇ ನಟಿಸಿರುವ ಎಲ್ಲಾ ಕಲಾವಿದರು, ತೀರಾ ನೈಜವಾಗಿರುವ ಲೊಕೇಶನ್ಸ್, ಕಾಸ್ಟ್ಯೂಮ್ ಮತ್ತು ಮೇಕಪ್ ಎಲ್ಲವೂ ಕಥೆಯನ್ನು ಸಾಮಾನ್ಯನಿಗೆ ಇನ್ನೂ ಹತ್ತಿರ ಮಾಡುತ್ತದೆ ( ಹಾಡಿನ ಚಿತ್ರೀಕರಣದಲ್ಲಿ ಬಟ್ಟೆ ಒಗೆಯಲು ಬಂದು ನಿಂತು ಯೋಚನೆಯಲ್ಲಿ ಮುಳುಗಿರುವ ಹುಡುಗಿಯ ಗಮನಕ್ಕೆ ಬಾರದ ನೀರು ತುಂಬಿ ಹರಿಯುತ್ತಿರುವ ಸನ್ನಿವೇಶವಾಗಲಿ, ಮನಗೆ ಯಾರೋ ಬಂದಾಗ ಅಮ್ಮನನ್ನೇ ಕರೆಯುವ ಮಗ and many subtle acting scenes, etc etc).
ಮುಖ್ಯ ಪಾತ್ರದಾರಿ ಹಾಗೂ ನಿರ್ದೇಶಕರಾದ ರಾಜ್ ಬೀ ಶೆಟ್ಟಿಯವರ ಮೊದಲನೇ ಚಿತ್ರವಾದರೂ ಪ್ರತಿಯೊಬ್ಬನಲ್ಲೂ ಯಾವುದೋ ರೂಪದಲ್ಲಿ ಇರುವ ಜನಾರ್ಧನನನ್ನು ಕಣ್ಣ ಮುಂದೆ ತಂದು ನಿಲ್ಲಿಸುವಲ್ಲಿ ಎಲ್ಲೂ ತಡಕಾಡದೆ ಸಲೀಸಾಗಿ ಅಭಿನಯಿಸಿದ್ದಾರೆ. ನನಗೆ ತುಂಬಾನೇ ಇಷ್ಟವಾದದ್ದು, ಕನ್ನಡಿಯ ಮುಂದೆ ಕೂತು ಮನಸಿನಲ್ಲೇ ಮಾತಾಡುವ ಸೀನ್. ಬಾಯಲ್ಲಿ ಡೈಲಾಗ್ ಹೇಳದೆ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವುದನ್ನು ತುಂಬಾನೇ ನಾಟುವ ಹಾಗೆ ಮಾಡಿದ್ದಾರೆ - I think it is very hard.
ಮೊಟ್ಟೆ ಹಾಡಿನ ಶುರುವಿನಲ್ಲಿ ಬಾಯಿತಪ್ಪಿ ಬರುವ ಬೈಗುಳ ಅಥವಾ ದ್ವಂದ್ವಾರ್ಥ ತುಂಬಿದ ಸಂಭಾಷಣೆ ಸರಾಗವಾಗಿಯೇ ಇದೆಯೇನೋ ಎಂದು ಭಯ ಪಟ್ಟಿದ್ದ ನನಗೆ, ಚಿತ್ರದ ತಿಳಿಹಾಸ್ಯ, ಮಳೆಯ ನಂತರದ ತಂಗಾಳಿಯಂತೆ ಮುದ ನೀಡಿತು. ತುಂಬಾನೇ ಸಿಂಪಲ್ ಆಗಿರುವ ಸಂಗೀತ ಹಿತವಾಗಿದೆ.
ಜನಾರ್ದನನ ಜೊತೆಗೆ ಶ್ರೀನಿವಾಸ್ ಹಾಗೂ ಜನಾರ್ದನನ ತಮ್ಮನ ಪಾತ್ರದಾರಿಗಳ ಅಭಿನಯ ನನಗೆ ತುಂಬಾನೇ ಇಷ್ಟ ಆಯ್ತು - ಹಿತಮಿತ.
ಶುದ್ಧ ಮಂಗಳೂರಿನ ಕನ್ನಡ - icing on the cake!
ಒಂದು ಚಿತ್ರ ಹಿಟ್ ಆಗಬೇಕಾದರೆ ೫-೬ ಹಾಡುಗಳು, ಭವ್ಯವಾದ ಲೋಕೇಶನ್ಗಳು, ದುಬಾರಿ ಸೆಟ್ಸ್ ಅಥವಾ ಮಚ್ಚು ಕತ್ತಿ ಬೇಕಿಲ್ಲ. ಈ ಚಿತ್ರ ನೋಡುವಾಗ ಜನರ ಶಿಳ್ಳೆ ಹಾಗೂ ಚಪ್ಪಾಳೆ ಬಿದ್ದದ್ದು ಅಡಿಯಿಂದ ಮುಡಿಯವರೆಗೂ ೩೬೦ ಡಿಗ್ರೀ ಕ್ಯಾಮರ ಸುತ್ತಿಸಿ ಸ್ಲೋ ಮೋಶನ್ನಲ್ಲಿ ಹೀರೋನ ಪರಿಚಯಿಸಿದಾಗ ಅಥವಾ ಓವರ್ ತೆ ಟಾಪ್ ಡೈಲಾಗ್ಗೆ ಅಲ್ಲ..... ಕಥೆ ಗೆದ್ದಾಗ, ನಮ್ಮ ದೈನಂದಿನ ಜೀವನವನ್ನ ಹಾಸ್ಯ ರೂಪಕವಾಗಿ ಕಣ್ಣಿನ ಮುಂದೆ ತಂದು ನಿಲ್ಲಿಸಿದಾಗ.
ಇನ್ನೆಂದೂ ಇಲ್ಲಿ ಥಿಯೇಟರ್ನಲ್ಲಿ ಕನ್ನಡ ಚಿತ್ರ ನೋಡುವುದು ಪ್ರಯೋಜನವಿಲ್ಲ ಎಂದುಕೊಂಡಿದ್ದ(ಹಿಂದಿನ ಕೆಲವು ಅನುಭವಗಳು!) ನಮ್ಮಂಥ ಜನರಿಗೆ ಈ ಚಿತ್ರ ಭರವಸೆಯನ್ನ ಮೂಡಿಸಿದೆ. ಕೇವಲ ೧೬ ದಿನಗಳಲ್ಲಿ ಅಚ್ಚುಕಟ್ಟಾಗಿ ಮಾಡಿರುವ ಈ ಹಾಸ್ಯ ಭರಿತ ಚಿತ್ರವನ್ನು ವಯಸ್ಸಿನ ಮಿತಿ ಇಲ್ಲದೆ ಎಲ್ಲರೂ ಮುಜುಗರವಿಲ್ಲದೆ ನೋಡಿ ಬರಬಹುದು, ೨ ಘಂಟೆಗಳ ಕಾಲ ಹಗುರಾಗಿರಬಹುದು!
ಈ ಚಿತ್ರ ಕಡಿಮೆ ಖರ್ಚಿನಲ್ಲಿ ಸಹ ಜನರನ್ನು ಆಕರ್ಷಿಸುವ ಕಥೆ ಹೇಳಿ, ಜನರನ್ನು ಥಿಯೇಟರ್ಗೆ ಕರೆಸಬಹುದೆಂದು ಸಾಬೀತು ಮಾಡಿದೆ. ಬೆಂಗಳೂರಿನಲ್ಲಿ ಚಿತ್ರ ಜುಲೈನಲ್ಲಿ ರಿಲೀಸ್ ಆದಾಗ ಎಲ್ಲರೂ ಥಿಯೇಟರ್ಗೆ ಹೋಗಿ ನೋಡಿ, ಮನಸ್ಪೂರ್ವಕವಾಗಿ ನಕ್ಕು, ಮೊಟ್ಟೆ ಎಂದು ಕರೀತಿರೋ, ಅಥವಾ ಮೊಟ್ಟೆಯಾಗಿದ್ದರೂ ಅದನ್ನ ಸಂತೋಷದಿಂದ, ಸ್ವೀಕರಿಸುತ್ತೀರೋ ನೀವೇ ನಿರ್ಧರಿಸಿ!
Here is a small peek into audience feedback :

No comments:
Post a Comment