ಮನದ ಕಿಟಕಿಯ ತೆರೆದು ನೋಡು ನೀನ್ಹೊರಗೆ....!

ಮನದ ಕಿಟಕಿಯ ತೆರೆದು ನೋಡು ನೀನ್ಹೊರಗೆ.....
ಮನದ ಕಿಟಕಿಯ ತೆರೆದು ನೋಡು ನೀನ್ಹೊರಗೆ.....

ಬಿರುಗಾಳಿ ಇಹುದಹುದು,
ಬಿರುಸಾದ ಮಳೆಯಿಹುದು,
ಆದ ಸರಿಸಿ ನೋಡಿದರೆ,
ನೀ ನಡೆವ ದಾರಿಯಿಹುದು....

ಮನದ ಕಿಟಕಿಯ ತೆರೆದು ನೋಡು ನೀನ್ಹೊರಗೆ.....

ಶೂನ್ಯವನು ತೊರೆದು,
ಎದುರಿಗಿನ ಬೆಳಕ ನೋಡು
ಕಿರುಬೆರಳ ಹಿಡಿದು,
ಮುನ್ನಡೆವ ಮಗುವ ನೋಡು...

ಮನದ ಕಿಟಕಿಯ ತೆರೆದು ನೋಡು ನೀನ್ಹೊರಗೆ.....

ಗೋಡೆಯಿದೆಯೆಂದು ಬೆನ್ನ ಮಾಡದಿರು,
ಕೂಗಿ ನೋಡೊಮ್ಮೆ, ನೆರವೊಂದು ಬರಬಹುದು.
ಹೊರಗಲ್ಲ ಗದ್ದಲ, ಒಳಗಿಹುದು ತಳಮಳ...
ಅದಕೆಂದೇ,...

ಮನದ ಕಿಟಕಿಯ ತೆರೆದು ನೋಡು ನೀನ್ಹೊರಗೆ.....
ಮನದ ಕಿಟಕಿಯ ತೆರೆದು ನೋಡು ನೀನ್ಹೊರಗೆ....

Comments

Popular posts from this blog

Exotic Ghatikallu Trip

ನಾ ಜಾರುತಿಹೆ