ನನ್ನ ಹಿಂದಿನ ಬ್ಲಾಗ್ ಯಾಕೋ ನನಗೆ ಖುಷಿ ಕೊಡಲಿಲ್ಲ.....
ಚಿಕ್ಕಮಗಳೂರಿನ ಸೌಂದರ್ಯವನ್ನು ಸರಿಯಾಗಿ ವಿವರಿಸಿಲ್ಲ ಅನ್ನೋ ಕೊರಗು ಕಾಡುತ್ತಲೇ ಇತ್ತು......
ಅದಕ್ಕೆ ಸಾಟಿಯಾಗೋ ರೀತಿಯ ಪದ ಬಳಕೆ ಸಾಧ್ಯವಾಗದೆ ಇದ್ದರೂ ಕನಿಷ್ಟ ನ್ಯಾಯ ಒದಗಿಲ್ಲ ಅಂತ ಕಾಡುತ್ತಲೇ ಇತ್ತು....
ಆ ಕಾಡುವಿಕೆ, ಆ ಸೊಬಗಿನ ಸತಾಯಿಸುವಿಕೆಯೇ ಇಲ್ಲಿ ಕವನದ ರೂಪ ಪಡೆಯೋ ಹಾಗೆ ಮಾಡಿದೆ.......
ಚಿಮ್ಮುವ ಮುಂಜಾವಿನಲಿ
ಬಾಣಾದಿಯದೇ ಚಿಲಿಪಿಲಿ
ಇರುಳಿನ ಹೊದಿಕೆ ಸರಿಯೇ,
ದಿನಕರನ ಜೊತೆ ನೀ ನಡೆಯೆ
ಮಲೆಯಲಿ ಆಗಿರೆ ಜಳಕ,
ಮೈಮನಕಾಗಿದೆ ಪುಳಕ....
ನಿನ್ನ ಲತೆಯೆಂಬ ಜಟೆಯಲಿ ಹನಿ ಹನಿ,
ಪೇಟೆ ಬಿನ್ನಾಣಕೆ ನೀ ವೈರಾಗಿಣಿ...
ಹಸಿರನುಟ್ಟು ಬಂದೆ ಸೀರೆ ರವಿಕೆ,
ದೂರದೂರಿಗಾದೆ ನೀ ಮರೀಚಿಕೆ
ನಿನ್ನ ಗೆಜ್ಜೇನಾದ ಮಾಡೋ ನದಿಯ ಪಾದ,
ಹಗಲಲ್ಲೆ ತುಂಬಿತಲ್ಲ ಮನಕೆ ಉನ್ಮಾದ
ಕರೆಯೋಲೆ ಮಂಜಿಗೆ ಕರೆಯೋಲೆ,
ಬೆಟ್ಟಾದ ಮೇಗಡೆ ಕಣ್ಣಾಮುಚ್ಚಾಲೆ .....
ಅಪ್ಪಿ ಕಣ್ಣ ಮುಚ್ಚಲು ಸರಿಗಮ,
ಮನಕೆ ಮನದೊಂದಿಗೆ ಸಮಾಗಮ.....
ಮಲೆಗಳಲ್ಲಿ ಮದುಮಗಳು,
ಸಿಂಗರಿಸಿ ನಿಂತಿಹಳು.....
ಇವಳೆ ನಮ್ಮ ಚಿಕ್ಕಮಗಳು ಊರಿನಲಿ
ನೆಲೆಯಾಗಿ ನಿಂತಿಹಳು ಮನದ ಬೇರಿನಲಿ
ಚಿಕ್ಕಮಗಳೂರಿನ ಸೌಂದರ್ಯವನ್ನು ಸರಿಯಾಗಿ ವಿವರಿಸಿಲ್ಲ ಅನ್ನೋ ಕೊರಗು ಕಾಡುತ್ತಲೇ ಇತ್ತು......
ಅದಕ್ಕೆ ಸಾಟಿಯಾಗೋ ರೀತಿಯ ಪದ ಬಳಕೆ ಸಾಧ್ಯವಾಗದೆ ಇದ್ದರೂ ಕನಿಷ್ಟ ನ್ಯಾಯ ಒದಗಿಲ್ಲ ಅಂತ ಕಾಡುತ್ತಲೇ ಇತ್ತು....
ಆ ಕಾಡುವಿಕೆ, ಆ ಸೊಬಗಿನ ಸತಾಯಿಸುವಿಕೆಯೇ ಇಲ್ಲಿ ಕವನದ ರೂಪ ಪಡೆಯೋ ಹಾಗೆ ಮಾಡಿದೆ.......
ಚಿಮ್ಮುವ ಮುಂಜಾವಿನಲಿ
ಬಾಣಾದಿಯದೇ ಚಿಲಿಪಿಲಿ
ಇರುಳಿನ ಹೊದಿಕೆ ಸರಿಯೇ,
ದಿನಕರನ ಜೊತೆ ನೀ ನಡೆಯೆ
ಮಲೆಯಲಿ ಆಗಿರೆ ಜಳಕ,
ಮೈಮನಕಾಗಿದೆ ಪುಳಕ....
ನಿನ್ನ ಲತೆಯೆಂಬ ಜಟೆಯಲಿ ಹನಿ ಹನಿ,
ಪೇಟೆ ಬಿನ್ನಾಣಕೆ ನೀ ವೈರಾಗಿಣಿ...
ಹಸಿರನುಟ್ಟು ಬಂದೆ ಸೀರೆ ರವಿಕೆ,
ದೂರದೂರಿಗಾದೆ ನೀ ಮರೀಚಿಕೆ
ನಿನ್ನ ಗೆಜ್ಜೇನಾದ ಮಾಡೋ ನದಿಯ ಪಾದ,
ಹಗಲಲ್ಲೆ ತುಂಬಿತಲ್ಲ ಮನಕೆ ಉನ್ಮಾದ
ಕರೆಯೋಲೆ ಮಂಜಿಗೆ ಕರೆಯೋಲೆ,
ಬೆಟ್ಟಾದ ಮೇಗಡೆ ಕಣ್ಣಾಮುಚ್ಚಾಲೆ .....
ಅಪ್ಪಿ ಕಣ್ಣ ಮುಚ್ಚಲು ಸರಿಗಮ,
ಮನಕೆ ಮನದೊಂದಿಗೆ ಸಮಾಗಮ.....
ಮಲೆಗಳಲ್ಲಿ ಮದುಮಗಳು,
ಸಿಂಗರಿಸಿ ನಿಂತಿಹಳು.....
ಇವಳೆ ನಮ್ಮ ಚಿಕ್ಕಮಗಳು ಊರಿನಲಿ
ನೆಲೆಯಾಗಿ ನಿಂತಿಹಳು ಮನದ ಬೇರಿನಲಿ
ಇಲ್ಲಿ ಒಬ್ಬ ಮದುಮಗಳ ಸಹಾಯ ಪಡೆದು , ಅವಳ ಸೌಂದರ್ಯಕ್ಕೆ ಪ್ರಕೃತಿ ಸೌಂದರ್ಯದ ಸಮನಾಗಿ ಹೇಳ ಹೊರಟಿದ್ದೀನಿ ....
ಒಬ್ಬ ವದುವಿನ ಮದುವೆ ಆಗೋ ಕಾಲಕ್ಕೆ ನಡೆಯೋ ಅವಳ ಜೀವನದ ಬದಲಾವಣೆ ಎಲ್ಲವನ್ನು ಇಲ್ಲಿ ಉಪಯೋಗಿಸಲು ಪ್ರಯತ್ನ ಮಾಡಿದ್ದೀನಿ...
ಭೂಮಿ ಇಲ್ಲಿ ವಧುವಾದರೆ, ಆ ಮುಗಿಲು ಅವಳ ಸಂಗಾತಿಯಂತೆ ಚಿತ್ರಿಸಿ, ಅವರ ಪ್ರತಿ ದಿನದ ಸಂಗಮವನ್ನು ನಿಮಗಿಲ್ಲಿ ಹೇಳ ಬಯಸಿದ್ದೀನಿ...
ಇಷ್ಟವಾದರೆ ತಿಳಿಸಿ.... ಕಷ್ಟವಾದರೂ ತಿಳಿಸಿ :)
7 comments:
ಕರೆಯೋಲೆ ಮಂಜಿಗೆ ಕರೆಯೋಲೆ,
ಬೆಟ್ಟಾದ ಮೇಗಡೆ ಕಣ್ಣಾಮುಚ್ಚಾಲೆ .....
nanage ee saalugalE atyanta muda needide.
bahala suundaravaada varnane haagu prasannateyannu untu maaduva pada guchchagala baLake. kavanada munchina tippaniyannu kavanada nanthara barediddare innu chennaagiruttiittu embubu nanna anisike.
heegeye bareyuttiri. nimage shreyassu sigali,
changes done praveen :)
pada balake sooper aagide.. concept kooda sooper.. nice poem.. :)
ಕರೆಯೋಲೆ ಮಂಜಿಗೆ ಕರೆಯೋಲೆ,
ಬೆಟ್ಟಾದ ಮೇಗಡೆ ಕಣ್ಣಾಮುಚ್ಚಾಲೆ .....
ಮಲೆಗಳಲ್ಲಿ ಮದುಮಗಳು,
ಸಿಂಗರಿಸಿ ನಿಂತಿಹಳು.....
ii heradu salu nange tumba ista advu.
kavana is too good, I felt the cold breath of the words while reading.
Good work Soum's
ಒಹ್! ಎಲ್ಲಿಂದ ಹುಡುಕ್ತಿ..ಪದಗಳನ್ನ..
ವೈರಾಗಿಣಿ ಅಂದ್ರೆ ಏನು???
ಪದ್ಯ ಸೂಪರ್..
nice :)
Its excellent madam....please keep writing.
All the best.
Post a Comment