ಸೋನೆ ಮಳೆ ಇದು ಸೋನೆ ಮಳೆ.....

ಸೋನೆ ಮಳೆ ಇದು ಸೋನೆ ಮಳೆ.....
ದೋಣಿಯಾಯಿತು ಮನದ ಹಾಳೆ.....

ಬರವಿಲ್ಲ ಬಿಡುವಿಲ್ಲ
ಹರಿಸುತ್ತಾ ಹೊರಟಿತು ಪ್ರೀತಿಯಾ ಹೊಳೆ....

ನವಿಲೊಂದು ಕುಣಿದಾಡಿ ಕಾನನದಿ,
ಹಗುರಾಯ್ತು ಮನವಿಂದು ಗರಿಗೆದರಿ....
ಕೂ... ಎಂದ ಕೋಗಿಲೆಯ ತಾನನದಿ
ಸಿಹಿಯಾಯ್ತು ದನಿ ಇಂದು ಜೇನ್ ಸವೆಸಿ.....

ಆಡೆಯಿಲ್ಲ, ತಡೆಯಿಲ್ಲ
ತೊಯ್ದ ಮನಕೆ ಬಂತು ಜೀವ ಕಳೆ....

||ಸೋನೆ ಮಳೆ ಇದು ಸೋನೆ ಮಳೆ.....||
ಹನಿಯೊಂದು ಚಿಪ್ಪಾಗಿ,ನಾನಿಂದು ಕೆಂಪಾಗಿ,
ಚಿಪ್ಪೊಂದು ಮುದ್ದಾದ ಮುತ್ತಾಯ್ತು,
ಮುತ್ತುಗಳ ಸಾಲಾಗಿ,ಈ ಕೊರಳ ಸರವಾಗಿ
ಕಣ್ತೆರೆದೂ ನಿನದೆ ಜಪವಾಯ್ತು .....

ಸೋನೆ ಮಳೆಯಿದು ನಿಲ್ಲೊಲ್ಲ,
ನೀ ಬಂದಾರೆ ನಿನ್ನ ಅಪ್ಪುವುದೆನ್ನ ಕೈಬಳೆ

||ಸೋನೆ ಮಳೆ ಇದು ಸೋನೆ ಮಳೆ.....||

Comments

Nidz said…
This is bad..u should put in translated version either english or hindi..:(

Luv,
Nidhi
Ramesh said…
please translate...
Kannadiga shiva said…
thumba channagide nimma padhya

this is kannadanannausiru.blogspot.com
sangeetha said…
its fantastic!!!:)

Popular posts from this blog

Exotic Ghatikallu Trip

ನಾ ಜಾರುತಿಹೆ