Total Pageviews

Wednesday, December 5, 2007

ಬೆಂಗಳೂರಲ್ಲಿ ಮಂಜಿನ ಮಳೆಯಾದರೆ?

ಈ ಲೇಖನದಲ್ಲಿ ಏನಾದರೂ ಎಡವತ್ತು ಮಾಡಿದ್ದರೆ, ದಯವಿಟ್ಟು ಪದ ಜೋಡಣೆ ಸರಿ ಇಲ್ಲದಿದ್ದರೆ, ಕಷ್ಟ ಪಟ್ಟು ಓದಿ....
ನನಗೆ ಇದನ್ನು ಇನ್ನೊಮ್ಮೆ ನೋಡಿ ಸರಿಪಡಿಸಲು ಸಮಯವಿಲ್ಲದ್ದರಿಂದ ಇದನ್ನು ಹಾಗೆಯೇ ನಿಮ್ಮ ಮುಂದಿಟ್ಟಿದ್ದೇನೆ.....
ನಿಮಗೆನನಿಸಿತು ಅಂತ ಖಂಡಿತ ತಿಳಿಸಿ............


ಮುಂಜಾನೆ ಕನಸಿನ ಲೋಕದಿಂದ ಎದ್ದು, ಕಣ್ಣು ತೀವುತ್ತಾ ಆಫೀಸಿಗೆ ತಯಾರಾಗಿ ಹೋಗುವುದೆಂದರೆ ಸ್ವರ್ಗವನ್ನು ನನ್ನಿಂದ ಯಾರೋ ಕಿತ್ತುಕೊಂಡ ಹಾಗೆ.
ಮೊನ್ನೆಯೂ ಎಂದಿನಂತೆ ಬೆಳಗಿನ ಚುಮು ಚುಮು ಚಳಿಯಲ್ಲಿ ಎದ್ದು, ತಯಾರಾಗಿ ಆಫೀಸಿನ ಬಸ್ ಹಿಡಿದೆ. ಯಾಕೋ ಎಂದಿನಂತೆ ಆ ಹೊತ್ತು ಬಸ್ ಹತ್ತಿದ ಕೂಡಲೇ ಕಣ್ಣು ಮುಚ್ಚಲಿಲ್ಲ…
ರಡಿಯೋದಲ್ಲಿ ಒಂದು ಇಂಪಾದ ಹಾಡು ತೇಲಿ ಬಂದು, ಹೆಬ್ಬಾಳದ ಫ್ಲೈ ಓವರ್ ಮೇಲೆ ಬಸ್ ಹೋಗುತ್ತಿರುವಾಗ ನಮ್ಮ ಹೆಬ್ಬಾಳದ ಕೆರೆ ನನಗೆ ಕಾಶ್ಮೀರದ ದಾಲ್ ಲೇಕ್ ನಂತೆ ಭಾಸವಾಯಿತು.
ಅಷ್ಟು ಬೆಳಗ್ಗೆ ಟ್ರ್ಯಾಫಿಕ್ ಇರದ ಫ್ಲೈ ಓವರ್ ಮೇಲೆ ನಮ್ಮ ಗಾಡಿ ಹೋಗುತ್ತಿರಲು, ಎಡಗಡೆ ಕೆರೆಯಲ್ಲಿದ್ದ ಆ ಹಸಿರು ಮತ್ತು ನೀರು ಕಣ್ತುಂಬಿತು.
ಆ ಪ್ರಶಾಂತವಾದ ನೋಟ ನನ್ನ ಮನಸ್ಸನ್ನು ಎಲ್ಲೋ ಎಳೆದು ಕರೆದೋಯ್ತು.
ಒಮ್ಮೆ ಕಣ್ಮುಚ್ಚಿದೆ…..
ಆ ನೀರು, ನಿಷ್ಕಲವಾಗಿ ಧ್ಯಾನ ಮಾಡುತ್ತಿರುವಂತ ನೀರಿನ ಮೇಲಿನ ಆಕಾಶದ ಪ್ರತಿಬಿಂಬ…. ಮೂಕ ಪ್ರೇಕ್ಷಕರಂತೆ ನಿಂತ ಆ ಚಿಕ್ಕ ಸರೋವರದ ಮರಗಳು….. ಅಲ್ಲಲ್ಲೇ ಹಾರಾಡುತ್ತಿರುವ ಬೆಳ್ಳಕ್ಕಿ…..ನನಗೆ ನಿಸರ್ಗವೇ ನನ್ನ ಬಳಿ ಬಂದಂತೆ ಭಾಸವಾತು.
ಹಾಗೆಯೇ ನನ್ನ ಲೋಕದಲ್ಲಿ ವಿಹರಿಸುತ್ತಿರಲು ರಡಿಯೋ ನಲ್ಲಿ 'ಫನಾ' ಚಿತ್ರದ 'ಚಾಂದ್ ಸಿಫಾರಿಶ್ ...' ಹಾಡು ಮೂಡಿಬಂದು ನನಗೆ ಒಂದು ಹೊಚ್ಚನೆಯ ಬೆಚ್ಚನೆಯ ಅನುಭವ ತಂದು ಆ ಚಿತ್ರದಲ್ಲಿನ ಕಾಶ್ಮೀರದ ಮಂಜನ್ನು ನನ್ನ ಕಣ್ಮುಂದೆ ತಂದು ನಿಲ್ಲಿಸಿತು.
ಎಲೆಯ ಮೇಲಿನ ಹನಿ ಹನಿ ಇಬ್ಬನಿ ನನಗೆ ಹಿಮವಾಗಿ ಗೋಚರಿಸಿ ಎಂದೂ ಕಾಣದ ಒಂದು ಆಸೆ ತಂದಿತು. ಬೆಂಗಳೂರಿನಲ್ಲಿ ಮಂಜಿನ ಮಳೆಯಾದರೆ...???
ಆ ಒಂದು ಆಲೋಚನೆಯೇ ನನ್ನ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿ, ಕಣ್ತೆರೆದೇ ಕನಸಿಗೆ ಎಳೆದೋಯ್ತು…..
ನಮ್ಮ ಲಾಲ್ ಬ್ಯಾಗ್ ನಲ್ಲಿ ಹೂಗಳ ಮೇಲೆ ಬಿಳಿ ಮಂಜಿನ ಸಾಲೆ,
ಮಂಜಿನ ಮಳೆಯಲ್ಲಿ ತೊಯ್ದ ಹೆಣ್ಣು ಮಗಳಂತೆ ಕಂಡ ವಿಧಾನಸೌಧ…..
ಬಿಳಿ ಮಂಜಿಗೆ ಸ್ಪರ್ಧೆಯ ಒಡ್ದುವಂತೆ ನಮ್ಮ ಕೆಂಪು ಹೈ ಕೋರ್ಟ್…..
ಕಪ್ಪನೆಯ ರೋಡ್ ಮೇಲೆ ಹತ್ತಿಯಂತೆ ಬಿದ್ದ ಮಂಜಿನ ರಾಶಿ…..
ನಾನು ಹಾಗೆ ಸಾಗುತಿರಲು…. ಅಲ್ಲೇ ಪಕ್ಕದ ಶಾಲೆಯಿಂದ ಹೊರ ಓಡಿ ಬಂದು ಆಟವಾಡುತ್ತಿರುವ ಮಕ್ಕಳು….
ಮನೆಯ ಕಿಟಕಿ ತೆರೆದು ಸೊಗಸನ್ನು ಅನುಭವಿಸುತ್ತಿರುವ ಹೆಣ್ಣು, ಗಂಡು……
ಆರಾಮ ಕುರ್ಚಿ ಮೇಲೆ ಶಾಲು ಹೊದ್ದು , ಬೆಚ್ಚಗೆ ಕಾಫೀ ಹೀರುತ್ತ ಕೂತ ಅಜ್ಜನಿಗೆ ಹೋಗಿ ಸ್ವಲ್ಪ ಮಂಜನ್ನು ಕೆನ್ನೆಗೆ ಬಳಿಯ ಬೇಕೆನಿಸಿತು.
ಹಾಗೆ ಮುಂದಕ್ಕೆ ಸಾಗಿ….ಮುಸ್ಸಂಜೆ ಮೂಡುತ್ತಿರಲು, ಕಡಲೆ ಕಾಯಿ ಹುರಿಯಲು ಬೆಂಕಿ ಹಚ್ಚಲು ಕಷ್ಟ ಪಡುತ್ತಿರುವ ಕಡಲೆ ವ್ಯಾಪಾರೀ……
ಅಲ್ಲೇ ನಿಂತು ಜೋಳ ಮಾರುತ್ತಿರುವವನ ಬಳಿ ಜೋಳ ಕೊಂಡ ನಾನು, ಹಾಗೆ ಮಂಜಿನಿಂದಾಗಿ ಕಮ್ಮಿ ಇದ್ದ ಎಂ ಜಿ ರೋಡಿನ, ಮೇಲೆ ನಡೆಡಾದಿದೆ….. ಎಲ್ಲರೂ ಸ್ವರ್ಗ ಇಲ್ಲೇ ಎನ್ನುವಂತೆ ತಮ್ಮ ಕೈಚಾಚಿ ಮಂಜನ್ನು ಅಪ್ಪಿದ್ದನ್ನು ಕಂಡು ಖುಷಿ ಪಟ್ಟೆ….
ಕತ್ಟಳಾಗುತ್ತಿದ್ದಂತೆ ಜಗಮಗಿಸುವ ದೀಪಗಳು ಹೊತ್ತಿಕೊಂಡವು….
ಮಂಜಿನ ಹುಚ್ಚಿಂದ ತೊಯ್ದ ಜನರಿಗೆ ಶೀತ ಶುರುವಾಯ್ತೇನೋ…
ಯಾರೋ “ಆಆಕ್ಷಿ” ಅಂದಾಗ, ಕಣ್ಣು ತೆರೆದು…. ನೋಡಿದೆ… ನಾನಾಗಲೇ ಆಫೀಸಿನ ಬಳಿ ಬಂದು ತಲುಪಿದ್ದೆ…..
"ಛೇ ಬಳಿ ಮಳೆಯು ಬಾರದ ಈ ಚಳಿಗಾಲದಲ್ಲಿ ಮಂಜಿನ ಮಳೇನ ಕನವರಿಸುತ್ತಿದ್ದೀನಲ್ಲ" ಅಂತ ನನ್ನ ತಲೆಗೆ ನಾನೇ ಹೊಡೆದುಕೊಂಡೆ
ಆದರೆ… ನನ್ನ ಆ ಹುಚ್ಚು ಆಸೆ ಮಾತ್ರ ಹೋಗಲಿಲ್ಲ….. “ಬೆಂಗಳೂರಿನಲ್ಲಿ ಮಂಜಿನ ಮಳೆಯಾಗಬಾರಾದೆ?”
ಎರಡು ದಿನ ಹೀಗೆ ಇದ್ದೇ…..
ಇಂದು ಮಧ್ಯಾನ ಊಟದ ನಂತರ ವಿಹರಿಸುತ್ತಾ ಆಕಾಶದ ಕಡೆ ನೋಡಿದೆ…
ಯಾಕೋ ನನ್ನ ಕನ್ನಡಕ ಸ್ವಲ್ಪ ಮಂಜಾಗಿದೆ ಎಂದು ತಿಳಿದು ಉಜ್ಜಿದೆ….
ಇಲ್ಲ ....ಮೋಡ ಆವರಿಸಿ ಸ್ವಲ್ಪ ಮಸುಕಾಗಿತ್ತು ಅಷ್ಟೇ…..
ಮತ್ತೆ ಮಂಜಿನ ಯೋಚನೆ ಬಂದಿತು, ಆದರೆ ದೇವರು ನನ್ನ ಆಸೆಗೆ ಸ್ವಲ್ಪ ಬೆಲೆ ಕೊಟ್ಟು ಚಿಕ್ಕ ಚಿಕ್ಕ ಮಳೆ ಹನಿಯನ್ನ ನನ್ನ ಮುಡಿಗೇರಿಸಿದ….
ಮಂಜಿಲ್ಲದಿದ್ದರೇನಂತೆ??? ಮಳೆಯಾದರು ಇದೆಯಲ್ಲಾ ಎಂದೂ ಆ ಹನಿ ಮಿಶ್ರಿತ ತಂಗಾಳಿಯಲ್ಲಿ ನನ್ನ ಕೂದಲನ್ನು ಹಾರಿಸುತ್ತಾ ಹೆಜ್ಜೆಹಾಕಿದೆ….
ನೀವೇನಂತೀರಿ?ಮಂಜು ಬೇಕಲ್ಲವೇ... ಒಂದು ದಿನದ ಅತಿಥಿಯಾಗಿ.....

3 comments:

Bharath Nagaraj said...

Tumba chennagidhe. Idhu ninage sikkiro vara idhannu heege munduvarisu.Innu inthahadanna odhakke ista padtheeni.

All the best.

Patavardhan, Praveen said...

suMdara lEkana.

nijavaagalU beMgaLUra agalikeyannu anuBaviside.

Anonymous said...

EEreethi bangaloorannu nenapisi kodahage bere bere stlgalaga Madikeri,Charmudi,Agumbe,Kudremukha nenapisikondu nimma kalpaneyalli ondu roopa kottare adbutha!!!!!!!!

Voices in my head

I am never alone Those days have gone long There are voices, there are voices… There are voicessssss up - when I close my eyes ...