Total Pageviews

Thursday, October 4, 2007

ಬಾಳು ನಿನ್ನದು, ಪಯಣ ನಿನ್ನದು ........

ಬಾಳು ನಿನ್ನದು, ಪಯಣ ನಿನ್ನದು 
ನೀನೆ ಅದರ ನಾವಿಕ
ಸುಳಿಯೂ ಇಹುದು,ಮಳೆಯು ಆಹುದು 
ತಡೆಯೋದೇ ಅದರ ಕಾಯಕ 

ಉಕ್ಕಿ ಹರಿಯುವ ನೀರ ನೋಡ 
ಅದರಲಿ ನೀನ್ ಈಜಬೇಡ 
ಕೊಡಿಯೊಮ್ಮೆ ಕಡಿಮೆಯಾಗಿರೆ, ಪಯಣ ನಿಲ್ಲಿಸಬೇಡ ||ಬಾಳು ನಿನ್ನದು 

ಒಣ ಭೂಮಿಯ ಅಗಿಯಲಹುದೆ ? 
ಮಳೆಗೆ ನೀನು ಕಾದಿರು.....
ಮೋಡವೊಡೆದ ಬಳಿಕ ಮಲಗಲಹುದೆ? 
ಬಿತ್ತನೆಯ ನೀ ಮಾಡಿರು. ||ಬಾಳು ನಿನ್ನದು 

ಮನದ ಹೊರಗೆ ಎಲ್ಲೋ ಇಲ್ಲ 
ನಿನ್ನ ಮಣಿಸೋ ವಂಚಕ 
ಆತ್ಮ ಸ್ಥೈರ್ಯದ ಕೊಳೆಯೂ ಸಲ್ಲ 
ನಿನ್ನ ಕನಸಿನ ಕಥಾನಕ. ||ಬಾಳು ನಿನ್ನದು 

ಯಾರ ಗಾಳಿ, ಯಾರ ನೀರು? 
ಯಾರು ಇದಕೆ ನಾಯಕ? 
ಕಟ್ಟೋ ಮೋಡ, ಕನಸ ಕಾಣೋ ಮನವು 
ಭೋರ್ಗರೆದರೇನೇ ಶುಭಪ್ರಾಯಕ.||ಬಾಳು ನಿನ್ನದು 

ನಿನ್ನ ಕನಸ ನೀನೆ ಈತಕೆ 
ಇಂದೆ ಮಣ್ಣ ಮಾಡುವೆ? 
ಉಸಿರು ನಿಂತ ದಿನವೆ ಅದಕೆ 
ಮುಕ್ತಿ ನಿನ್ನಿಂದ ಅಲ್ಲವೇ?? 
                                      -- ಸೋಶ್ 

4 comments:

Anonymous said...

tumba chennagide soumya....bahala arthapoorna vaagide.....u rock baby!!!!!!! keep it up !!!!! ninna haleya kavanagalannu idaralli bari......odugarige ninna nijavaada roopa gottagali....;) ;) ;)

raji

So.....me said...

Thank u dear!!

Unknown said...

mmm...just like the way teachers explain abstract poem in school to students clearly,you will have to explain this to me clearly though I have undertood to some extent:) :)

shillu said...

heyyy soo a nice blog page ... and to start ..a really nice poem ..we r happy to see more of ur poems ...here and ofcourseee the sayinggss....
cheerroo babess....as raji said u r really rockingg .....with raaaaaaaaaaji

Voices in my head

I am never alone Those days have gone long There are voices, there are voices… There are voicessssss up - when I close my eyes ...