೨೦೨೦ನೇ ಇಸವಿ ಶುರುವಾಗಿ ೪ ತಿಂಗಳು ತುಂಬಿ ೫ಕ್ಕೆ ಬಿದ್ದರೂ.... ದಿನಗಳು ಎಲ್ಲಿ ಓಡುತಿವೆ, ಜೀವನ ಎತ್ತ ಸಾಗಿದೆ ಎಂದು ದೂರಕ್ಕೆ ದೃಷ್ಟಿ ನೆಡುವ ಹಾಗೆ ಇಡೀ ಜಗತ್ತನ್ನೇ ಕುಣಿಸುತಿದೆ ಕೊರೋನ ಭೀತಿ. ಸಮುದ್ರಕ್ಕೆ ಇಳಿದ ಮೇಲೆ ಈಸಬೇಕು, ಇದ್ದು ಜಯಿಸಬೇಕು.... ಜೀವನದ ಸಾಗರದಲ್ಲಿ ಪಯಣ ಹೊರಟಿರುವ ನಾವು ಏನೇ ಕಷ್ಟಗಳು ಎದುರಾದರೂ ಹಡಗನ್ನು ಮುನ್ನಡೆಸುವ . ಧೃತಿ ಹೊಂದಿ ಸಾಗುತಿರಬೇಕು.... ಜೀವನ ಎಂಬ ಸಾಗರವು ನಗಿಸಿ, ಅಳಿಸಿ, ನಮ್ಮ ಅಳುವಿನಲ್ಲಿ ತಾ ಕುಣಿದು ತುಳುಕುವುದು. ಆದರೂ, ಜೀವನ ನಡೆಸಲೇಬೇಕು.....
ತಿಂಗಳಿನ ಬೆಳಕಿನಲಿ ಹಡಗು ಸಾಗಿರಲು,
ನರ್ತಿಸಿದೆ ಕಡಲು.....
ತೇಲುವುದೋ ಮುಳುಗುವುದೋ ಒಂದು ತಿಳಿಯದಿರಲು....
ನರ್ತಿಸಿದೆ ಕಡಲು...
ಚದುರುವುದೇ ಕಾರ್ಮೋಡ?
ತಪ್ಪುವುದೇ ಅಪಘಾತ?
ಯಾರೊ ಹೂಡಿದಾ ಸಂಚು......
ಬಾನಲೆರಗಿತೊಂದು ಮಿಂಚು...
ಮೇಘ ಗುಡುಗಿ ಆರ್ಭಟಿಸಿರಲು....
ನರ್ತಿಸಿದೆ ಕಡಲು......
ಹುಟ್ಟು ಹಾಕಿ ಪಯಣ,
ನಡೆಸುವುದೇ ಜೀವನ
ಬಿಡದೇ ನೀ ಸ್ಥೈರ್ಯ......
ನಡೆಸು ನಿನ್ನ ಕಾರ್ಯ....
ದೂರ ದಡವು ಕಾಣುತಲಿರಲು.....
ಮುಳುಗಲೀ ದಿಗಿಲು
No comments:
Post a Comment