ನಾ ಜಾರುತಿಹೆ

ಕಿಟಕಿ ಬದಿಯಲಿ ನಿಂತು
ಚಾ ಹೀರದಿರು ಚೆಲುವೆ,
ನಾ ಜಾರುತಿಹೆ......
ಮುಗಿಲು ಸೋರಿ
ತಂಪೆರಗಿರಲು.....
ಕಾಡಿಗೆ ತೀಡಿದಾ ನೊಟ ಕಾಡಿದೆ,
ನಾ ಜಾರುತಿಹೆ........

ಉಫ್ಫ್!!! ಮುಗುಳ್ನಗದಿರು,
ಮಿಂಚೆರಗಿದಂತಾಗಿದೆ  ,
ನಾ ಜಾರುತಿಹೆ......

ಒಂದೇ ಸಮನೇ ಓಡಿದೆ,
ಏದುಸುರಿನಾ ಓಟ...
ಕಲಿಸುವರು ಯಾರು,
ಹೃದಯ ದೋಚುವ ಪಾಠ

ಸನ್ನೆ ಮಾಡಿದರೆ,
ಸಂಬಂಧ ಕಟ್ಟು ವೆನು
ನೋಡೊಮ್ಮೆ ಚಾ ಮುಗಿವ ಮುನ್ನ,
ನಾ ಜಾರುತಿಹೆ

Comments

Popular posts from this blog

Exotic Ghatikallu Trip