Total Pageviews

Tuesday, February 9, 2016

ಆಡ ಬಯಸಿದೆ ಮನ...

ಆಡ ಬಯಸಿದೆ ಮನ
ನಿನ್ನೊಂದಿಗೆ  
ಆಡ ಬಯಸಿದೆ ಮನ

ನಿನ್ನ ದಾವಣಿ ಜೀರ್ಕುಣಿಕೆ ಹಾಕಿದೆ
ಮನ ಮೂಕಾಗಿ ಕೂಗಿದೆ
ಗಾಳಿ ಹಾಕಬಾರದೆ ?

ಆಡ ಬಯಸಿದೆ ಮನ
ನಿನ್ನೊಂದಿಗೆ  
ಆಡ ಬಯಸಿದೆ ಮನ

ಮಿಂಚಂತೆ ನಿನ್ನ ನೊಟ ಎರಗಿದೆ,
ಆಯಸ್ಕಾಂತವದು ನನ್ನ ಸೆಳೆದಿದೆ
ಗೋಲಿಯಂತ ಆ ಕಣ್ಣಿಗೆ,
ಮುತ್ತನಿಡಲೆ ನಾಮೆಲ್ಲಗೆ ?

 ಆಡ ಬಯಸಿದೆ ಮನ
ನಿನ್ನೊಂದಿಗೆ  
ಆಡ ಬಯಸಿದೆ ಮನ

ಜಡೆಯನೊಮ್ಮೆ ಎಳೆಯಲೇ?
ಇರುಳೆನ್ದು ಅದರಲ್ಲಿ ಹೊರಳಲೆ ?
ಬಳೆಯನೊಮ್ಮೆ ಕೆದಕಲೆ?
ಮದರಂಗಿಯ ನಾ ಕೈಮೇಲೆ ಗೀಚಲೆ????

ಆಡ ಬಯಸಿದೆ ಮನ
ನಿನ್ನೊಂದಿಗೆ  
ಆಡ ಬಯಸಿದೆ ಮನ


1 comment:

yashh said...

Chappale :) thumba chennagide

Freeze the time, now!

There are often moments, which we want to be over as soon as possible and there are some moments which just flash like a falling star and y...