ಗ್ರಹಣ
ಡಿಸೆಂಬರ್ ನಲ್ಲಿ ಗೊಕರ್ಣ ಹೋಗಿದ್ದ ಸಮಯದಲ್ಲಿ ಹುಣ್ಣಿಮೆ ಯ ರಾತ್ರಿಯಲ್ಲಿ ಗ್ರಹಣ ನೋಡೋ ಭಾಗ್ಯ ನನ್ನದಾಗಿತ್ತು. ಕಡಲ ತೀರದಲ್ಲಿ ಇರುಳು ಬೆಳಕಿನ ಆಟ ನನಗೆ ತೋಚಿದ ರೀತಿಯಲ್ಲಿ ಇಲ್ಲಿ ವರ್ಣಿಸಿರುವೆ.... ಆದರೆ ಇದು ಪ್ರಕೃತಿಯ ಆ ಸೌಂದರ್ಯದ  ಕೇವಲ ೧೦% ವರ್ಣನೆ ಅಷ್ಟೇ..... ಇಲ್ಲಿ ಇರುವುದೆಲ್ಲ ಅಲಿ ಕಂಡ ದೃಶ್ಯಾವಳಿ.... ಸಂಪೂರ್ಣ ಗ್ರಹಣ, ಹಾಲು ಬೆಳದಿಂಗಳು, ವಿಶಾಲ ಸಮುದ್ರ, ಉಕ್ಕು ತಿದ್ದ ಅಲೆಗಳು, ಜೊದಿಗಳ ಕಲರವಗಳು, ತಾರೆಯೊಂದರ ಸ್ಪೊಟ..... ಎಲ್ಲವೂ ಅಪೂರ್ವ ವಿಸ್ಮಯ....

ಇರುಳಿನಲಿದೆ ಬೆಳದಿಂಗಳ ಕಣ್ಣಾ ಮುಚ್ಚಾಟ
ಕವಿದಿರದೆ ಮೋಡ ಈ ಅಂಗಳ ತಂದಿದೆ ತೆರೆಗಳ ಆಟ

ಕೈಯಲ್ಲಿ ಕೈ ಹಿಡಿದು ನಡೆಯೋ ಪ್ರೇಮಿಗೆ
ತೆರೆ ನಿನ್ನ ಸಂಗೀತವದು, ಬಾನಲ್ಲಿ ದಾರಿ ದೀವಿಗೆ
ಮರಳ ಮೇಲೆ ಹೆಜ್ಜೆಯಿಟ್ಟು ಸಾಗುತಿತ್ತು ಪಯಣ
ಏನಾಯ್ತೋ ತಿಳಿಯದದು ಹಿಡಿಯಿತು ಗ್ರಹಣ

ಕಾರ್ಗಾಟ್ತಲು ಕವಿದಂತೆ ಕಡಲಿಗೆ
ಬಾನಲ್ಲಿ ತಾರೆಗಳು ಹೊಳೆದವು ಮಿರ ಮಿರ
ತಲೆಯಿಡುವೆ ನಾ ನಿನ್ನ ಮಡಿಲಿಗೆ
ಒಂದಾಗಿ ಎಣಿಸೋಣ ಚುಕ್ಕಿಗಳ ಬಾರ

ಒಂದೊಂದೇ ಒಂದೊಂದೇ ಚುಕ್ಕಿಯ ಆಟ
ಭೋರ್ಗರೆವ ಅಲೆಗಳ ಆಟ
ನಡುನಡುವೆ ನಡೆಯುತ್ತಾ ಚೆಲ್ಲಾಟ
ಭೋರ್ಗರೆದಿತ್ತು ಪ್ರೇಮಿಯ ಸಲ್ಲಾಪ

ಆದಾಗ ಅಲ್ಲೊಂದು ಚುಕ್ಕಿಯಾ ಸ್ಪೊಟ
ಹೊಳಪಲ್ಲಿ ನೆಟ್ಟಿತು ನನ್ನ ಈ ನೊಟ
ಬಯಸಿತು ಮನ  ಕೆಳೊಕೆ ವರ ಒಂದನು
ಕೇಳಿದೆ ಮರಳಿಸಲು ಚಂದಿರನನು

ಹೊರ ಬಂದ ಚಂದಿರನು ಭೂಮಿಯಾ ನೆರಳಿಂದ
ಅಪ್ಪಳಿಸುತಾ ಅಲೆಯೊಂದು ಮರಳಿಸಿತು ಆನಂದComments

Popular posts from this blog

Exotic Ghatikallu Trip

ನಾ ಜಾರುತಿಹೆ