ಚಂದಿರ ಕರಗಿದ ಮೋಡದ ಒಳಗೆ
ಭಾವವು ಬಾರದು ಯಾತಕೋ ಹೊರಗೆ
ಕಾಣದ ಕೈಯದು ಆಡಿಸಿದ ಹಾಗೆ
ಮನವಿದು ತೇಲಿದೆ ಜೊತೆಯಲಿ ಹಾಗೆ
ಇಂದಿಗೆ ಇಲ್ಲದ ಮುಂದಕೆ ಸಲ್ಲದ
ಹಿಂದಿನ ಬದುಕದು ಬಂದೀಗ ಕಾಡಿದೆ
ಬೆಮ್ಬಿಡದೆ ಕಾಣುವ ನೆನಪಲ್ಲಿ ಸಾಗುತ
ರೆಪ್ಪೆಯಲಿ ಅಪ್ಪಿ ತೇಲಿ ಬಿಡಬೇಕಿದೆ
ಇರುಳಾದ ಮೇಲೆ ಹಗಲೊoದು
ಹಗಳಾದ ಮೇಲೆ ಇರುಳಿರಲೆoದು
ಒಬ್ಬರಿಗೆ ಇರುಳ, ಒಬ್ಬರಿಗೆ ಹಗಳ
ನೀಡಿ ಕೂತನಾತ ತಾ ಆಡಲೆoದು
ಆಟ ನಡೆಸಲೆ ಬೇಕಿದೆ ಈಗ
ಸೋಲೋ ಗೆಲುವೋ ಆಡು ನೀ ಬೇಗ