Total Pageviews

Thursday, February 14, 2019

ಕೊನೆ ಇದಲ್ಲ.....

ಫೆಬ್ರುವರೀ ೧೪ರಂದು ಪುಲ್ವಮಾದಲ್ಲಿ ನಡೆದ ಸೀಆರ್ಪೀಎಫ್ ಸೈನಿಕರ ಹತ್ಯಾಕಾಂಡವನ್ನು ಖಂಡಿಸುತ್ತಾ..... ಯೋಧರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ.... ಬಂಧು ಬಳಗಕ್ಕೆ ಬೆಂಬಲವನ್ನು ಸೂಚಿಸುತ್ತಾ......

ನೀತಿ ನಿಯಮವಿಲ್ಲದ ಜನುಮ
ಮಾನವೀಯತೆಯ ಮಾರಣಹೋಮ
ಮಾಡಿ ಕುಹಕವಾಡಿ  ಗಹಗಹಿಸಿ ನಗದಿರು
ಕೊನೆ ಇದಲ್ಲ ಸದೆಬಡಿವರು, "ಅಲ್ಲೇ" ನೀನು ಅಡಗಿರು
ಹೇಡಿ ನೀನು, ಹೇಯ  ನಿನ್ನ ಕೃತ್ಯ, ಅಡಗಿರು
ಕೊನೆ ಇದಲ್ಲ ಸದೆಬಡಿವರು, "ಅಲ್ಲೇ" ನೀನು ಅಡಗಿರು
ಹರಿಸಿರುವೆ ತಾಯಿಯ ಹಣೆಯಲ್ಲಿ ನೆತ್ತರು
ಕೊನೆ ಇದಲ್ಲ ಸದೆಬಡಿವರು, "ಅಲ್ಲೇ" ನೀನು ಅಡಗಿರು
ಕೋಟಿ ಹೃದಯ ಮಿಡಿದಿದೆ ಅಗಲಿದ ಚೇತನಕೆ
ಹಿಡಿಶಾಪವಿದೋ ಉಗ್ರನೇ, ಆ ನಿನ್ನ "ಸ್ವರ್ಗ"ಕೆ
ಗ್ರಹಣ ಕಳೆಯೇ ಮರಳಬೇಕು, ಮರಳುವನು ಸೂರ್ಯ
ಕಣ್ಣೀರು ಹಿಂಗಿದರೂ, ಹಿಂಗದು ನಮ್ಮವರ ಶೌರ್ಯ, ಆತ್ಮ ಸ್ಥೈರ್ಯ!
ಹೇಡಿ ನೀನು, ಹೇಯ  ನಿನ್ನ ಕೃತ್ಯ, ಅಡಗಿರು
ಕೊನೆ ಇದಲ್ಲ ಸದೆಬಡಿವರು, "ಅಲ್ಲೇ" ನೀನು ಅಡಗಿರು
                                                                 - - ಸೋಶ್

PC: Internet

Voices in my head

I am never alone Those days have gone long There are voices, there are voices… There are voicessssss up - when I close my eyes ...