ಸದಾ ಕಣ್ಮುಂದೆ ಓಡಾಡುತ ಹೃದಯ ಕದ್ದಿರುವ ಗೆಳತಿಗೆ ತನ್ನ ಪ್ರೀತಿಯ ನಿವೇದನೆ ಮಾಡುತ್ತಿರುವ ಪ್ರೇಮಿಯೊಬ್ಬನ ಮನಸಿನಾಳದ ಮಾತುಗಳು, ನನ್ನ ಕಲ್ಪನೆಯಲ್ಲಿ .... ಓದಿ ನಿಮ್ಮ ಅನಿಸಿಕೆ, ಅನುಭವಗಳನ್ನು ನನ್ನೊಂದಿಗೆ ಹಂಚಿಕೊಳ್ಳಿ.... :)
ಮುದ್ದಾದ ನಿನ್ನ ಹೃದಯ
ನಿನ್ನ ಬಳಿಯೆ ಇದೆಯಾ?
ಹಾಕುವೆನು ಅರ್ಜಿಯಾ,
ತೊರಿಸು ಕಾಳಜಿಯ
ಕಿಲಕಿಲನೆ ನಕ್ಕಾಗ,ಜುಮುಕಿಯ ತಕಧಿಮಿಥ
ಹೇಳಲಿ ಏನೆಂದು
ಎದುರು ನೀ ನಿಂತಾಗ,ನನ್ನೆದೆಯ ಏರಿಳಿತ
ದೂರಲಿ ಏನೆಂದು
ನಾಚಿ ನೀ ಹೊರಟಾಗ, ಮನಸಾಯ್ತು ಕಣ್ಮರೆ
ಕಿರುನೋಟ ಎಸೆದಾಗ, ನಿಂತೊಯ್ತು ನನ್ನುಸಿರೆ
ಹಾಕಿಬಿಡಲೆ ಅರ್ಜಿಯಾ
ತೊರಿಸು ಕಾಳಜಿಯ
ನನ್ನದಲ್ಲದ ದಾರಿಯಲ್ಲಿ, ನಿನಗಾಗಿ ಕಾದು ನಿಂತೆ
ಕೇಳು ಯಾಕೆಂದು
ಹೋಗದಿರು ನೋಡಿ ನನ್ನ, ಕಂಡರೂ ಕಾಣದಂತೆ
ದಾರಿಯ ಧೂಳೆಂದು
ಪ್ರಶ್ನೆಯಲಿ ಕೊನೆಗೊಂಡಿದೆ ಪರೀಕ್ಷೆ
ಉತ್ತರಿಸುವೆ ಸರಿಯಾಗಿ ಎಂದೇ ನಿರೀಕ್ಷೆ
ಹಾಕಿರುವೆ ಅರ್ಜಿಯಾ,
ತೋರಿಸಮ್ಮ ಚೂರು ಕಾಳಜಿಯ