ನೂರಾರು ಮೈಲುಗಳಷ್ಟು ದೂರ
ಇದ್ದರೂ ಮನಸೆoದಿತು, ಕಣ್ಮುಂದೇ ಬಾರ...
ನೋಡಿದೆನು ಮಂಜನ್ನು, ಕರಗಿತು ಮನಸಾಗ,
ತಬ್ಬಿದೆನು ಛಳಿಯನ್ನು, ಮೀಟುತಾ ಮೌನರಾಗ
ನೀನೀರದೆ ಮನಸಲಿ ಕೋಲಾಹಲ,
ಕಾಣಬೆಕು ನೀನು, ಕಳೆಯಲೀ ಕಳವಳ....
ನಿನ್ನೊಂದಿಗೀನಾ ಪ್ರೇಮ ಮಧುರ,
ಗಾಢವಾಗಿದೆ ಹೋದಾಗಿಂದ ನಾ ದೂರ,
ಬರುವೆನು ನಾ, ಕಾಯುತಿರು ದಾರಿಯನು,
ಮುಗಿಸಿಬಿಡುವ ನಮ್ಮ ಪ್ರೀತಿಯ ವೈರಿಯನು....
ಮೂಡುತಲಿ ಬಾನಿನಲಿ ಹೊಂಗಿರಣ,
ಆಗುವುದು ಈ ವಿರಹದಾ ಮರಣ...
ಯಾನವಿದೆ ಕೆಲವೇ ಮೈಲುಗಳಷ್ಟು ದೂರ,
ಇದ್ದರೂ ಮನಸೆoದಿತು, ಕಣ್ಮುಂದೆ ನೀ ಬಾರ..!