Total Pageviews

Monday, April 27, 2009

ಜೊತೆ ಜೊತೆಯಲಿ.....

ಮಳೆ ಎಂದರೆ ಅದೇನೋ ನನ್ನೊಳಗಿನ ಕವಿಗೆ ಬಹಳ ಇಷ್ಟ ಅಂತ ಅನಿಸುತ್ತೆ....
ಬೇಸಿಗೆಯ ಮಳೆಯಲ್ಲಿ ನಾ ಕಂಡ ಒಂದು ಸಿಹಿ ಅನುಭವವನ್ನು ಮರೆಯಲಾರದೇ ಇಲ್ಲಿ ಛಾಪಿಸಿದ್ದೀನಿ ಬೇಸಿಗೆಯ ಬೇಗೆಯಲ್ಲಿ, ರಸ್ತೆಯಲ್ಲಿದ್ದಾಗ ಆಕಸ್ಮಿಕವಾಗಿ ಬಿದ್ದ ಮಳೆಯಲ್ಲಿ, ಪಕ್ಕದಲ್ಲಿ ಹಾದು ಹೋದ ಒಂದು ಜೋಡಿ ಹಕ್ಕಿಗಳ ಕಂಡು ನನಗೆ ನಾನೇ ಕಲ್ಪನಾ ಲೋಕದಲ್ಲಿ ವಿಹರಿಸಿ, ನನ್ನ ಭಾವಕ್ಕೆ ಅಳವಡಿಸಿಕೊಂಡಾಗ ಮೂಡಿದ್ದೇ ಜೊತೆ ಜೊತೆಯಲಿ....
ನಿಮಗಿದು ತಂಪೆನಿಸಿದರೆ, ಅಥವಾ ಜಡಿ ಮಳೆ ಎನಿಸಿದರೂ ನಿಮ್ಮ ಅನಿಸಿಕೆಯನ್ನು ನನಗೆ ದಯವಿಟ್ಟು ತಲುಪಿಸಿ :)




ಹೆಜ್ಜೆಯೊಂದಿಡಲು ನೀ ಗೆಳೆಯ
ಜೊತೆ ಮಾಡುವೆ ನಾ ಗೆಜ್ಜೆ ದನಿಯ....

ನಿನ್ನ ಪೆದ್ದು ಮುದ್ದು ಹುಡುಗಿ
ನಾ ಮೆಚ್ಚಿ ಬಂದೆ ನಿನ್ನ ಹುಡುಕಿ
ದಾರಿ ಸವೆಯುವುದು ನೀ ಮೌನ ಮುರಿದರೆ
ಹೆಕ್ಕಿ ಪೋಣಿಸುವೆ ಮುತ್ತುಗಳು ಸುರಿದರೆ...

ಸೋಕಿದ್ದು ನಾನಲ್ಲ,ದೂಡಿದ್ದು ಸಿಹಿ ಗಾಳಿ
ಹರಸೀತು ಬಾನಾಗ,"ನೂರ್ಕಾಲ ಜೊತೆ ಬಾಳಿ"
ಪಿಸುಗುಡಲು ನಿನ್ನ ಉಸಿರೇ,
ಮನ ಉಲಿಯಿತು ನಿನ್ನ ಹೆಸರೇ

ಮುಂಗುರುಳ ಕಾರ್ಮೋಡ ನೀ ತೀಡಲು
ಹೂಮಳೆಯ ಸುರಿಸಿತು ಕಣ್ ಕಡಲು
ಗುಡುಗಾಗ ಬೇಡ ಈ ಮನಕೆ
ಬೆಚ್ಚಗೆ ನೀಡೊಂಡಪ್ಪುಗೆ

ಹೆಜ್ಜೆಯೊಂದಿಟ್ಟು ನೋಡು ಜೊತೆಯಲಿ
ಚಾದರವ ಹೊದಿಸುವೆ ಬಿಸಿಲ್ ಮಳೆಯಲಿ

Voices in my head

I am never alone Those days have gone long There are voices, there are voices… There are voicessssss up - when I close my eyes ...